ಎರಡುಕೆರೆ ಕುಲದ ಮಲಗೊಂಡಶಿಂಗ್ರಿ

ಎರಡುಕೆರೆ ಕುಲದ ಮಲಗೊಂಡಶಿಂಗ್ರಿ

ಆತ್ಮೀಯ ಕುಂಚಿಟಿಗ ಕುಲ ಬಾಂಧವರೇ ! ಕುಂಚಿಟಿಗ ಜನಾಂಗದ ಎರಡುಕೆರೆ ಕುಲದ ಮೂಲಪುರುಷ ಕುಂಚಿಟಿಗ ನಾಡಗೌಡ ಬಿರುದಾಂಕಿತ ಸಮಸ್ತ ಕುಂಚಿಟಿಗ ಕುಲ ಕೈವಾಡಸ್ತರಿಗೆ ಸಮಸ್ತ ಬಂಧು ಬಳಗದವರೆಗೆ , ವಲಸೆ ಬರುವಾಗ ಮರದ ಬಂಡಿಗಳನ್ನು ಮಾಡಿಸಿ ತನ್ನ ಜನಾಂಗದವರನ್ನು ಕಾಪಾಡಿದ ಆಪದ್ಭಾಂಧವ " ಶ್ರೀ ಮಲಗೊಂಡ ಶಿಂಗ್ರಿಯವರು " ಕುಂಚಿಟಿಗ ಕುಲಸ್ಥರ ಬದುಕು ಚಿಂತಾ ಜನಕದಲ್ಲಿದ್ದಾಗ ಪೆನುಗೊಂಡೆ ಪ್ರಭುರಾಯರ ಬಳಿ ಹೋಗುವುದಕ್ಕೆ ಕಂಚಿನ ಬಂಡಿಗೆ ಎಡಕ್ಕೆ ಹೆಗ್ಗಣ , ಬಲಕ್ಕೆ ಮೇಕೆ ಹೋತ ಕಟ್ಟಿ ರಾಗಿಕಲ್ಲು ಚತ್ರಿಗೆ ಮಾಡಿ ನಾಗರಹಾವು , ಬಾರುಕೋಲನ್ನು ಮಾಡಿಕೊಂಡು , ಹುಲಿಚರ್ಮ ಸೊಂಟಕ್ಕೆ ಕಟ್ಟಿ ಕೊಂಡು ಪೆನುಗೊಂಡೆ ಬೆಟ್ಟವನ್ನು ಹತ್ತಿಸಿ , ಸಾಂಸ್ಕೃತಿಕ ಹಿತ ಹಾಸ ಸೃಷ್ಠಿಸಿದ ಮಹಾವೀರ ಮಹಾ ಪವಾಡ ಪುರುಷ ಕುಂಚಿಟಗ ಕುಲಸ್ಥರು ಸುಖಶಾಂತಿ ಇಂದ ನೆಮ್ಮದಿಯಿಂದ ಬಾಳ್ವೆ ಮಾಡಲು ಪೆನುಗೊಂಡೆ ಮಹಾರಾಜ ರಾಯರ ಕಡೆಯಿಂದ ಶಾಸನ ಹೊರಡಿಸಿ ತರಲು ಶ್ರಮಿಸಿದರು . ಇಂತಹ ಮಹಾಶಕ್ತಿ ಪುರುಷನ ಕೊಡುಗೆ ಕುಂಚಿಟಿಗ ಜನಾಂಗಕ್ಕೆ ಅಪಾರ ವಾದದ್ದು ಮುಂದೆ ಶಾಸನದ ವಿಧಿಯಂತೆ ಮಲಗೊಂಡ ಶಿಂಗ್ರಿಯವರು , ತನ್ನ ಗುಂಪಿನೊಂದಿಗೆ ಆಂಧ್ರಪ್ರದೇಶದ ಕಲ್ಯಾಣದುರ್ಗ ತಾಲ್ಲೂಕಿನ ಒಂದು ಪ್ರದೇಶವನ್ನು ತಲುಪಿ , ಅಲ್ಲಿ ಒಂದು ಗ್ರಾಮವನ್ನು ಕಟ್ಟಿ , ಆ ಗ್ರಾಮಕ್ಕೆ ತನ್ನ ಗೋತ್ರದ ಹೆಸರಾದ " ಎರಡುಕೆರೆ " ಗ್ರಾಮ ಎಂದು ನಾಮಕರಣ ಮಾಡಿರುತ್ತಾರೆ . ಇದೇ ಎರಡುಕೆರೆ ಗ್ರಾಮದಲ್ಲಿ ಎರಡುಕೆರೆ ಗೋತ್ರದವರಿಗೆ ಶ್ರೀ ಶಂಕರಲಿಂಗೇಶ್ವರನ ದೇವಸ್ಥಾನ ಕಟ್ಟಿಸಿದ್ದಾರೆ . ಇದೇ ದೇವಸ್ಥಾನದ ಮುಂಬಾಗ ಒಂದು 11 ನೇ ಶತಮಾನದ ಶಾಸನ ಕಲ್ಲು ಇದ್ದು ಇದು ಕುಂಚಿಟಿಗರ ಮೊಟ್ಟ ಮೊದಲಿನ ಶಿಲಾ ಶಾಸನ ವಾಗಿರುತ್ತದೆ . ಇದರ ಮೊದಲ ವಾಕ್ಯ " ಕುಂಚಿಟಿಗ ಸಮುದ್ರ " ಎಂದು ಬರಿಸಿದ್ದಾರೆ , ಇಲ್ಲಿಂದ ಮಂದೆ ಮುನ್ನೆಡದು ಮಡಕಶಿರ ತಾಲ್ಲೂಕಿನ ಜಿಲ್ಲರಗುಂಟೆಗೆ ತನ್ನ ಜನಾಂಗ ದೊಂದಿಗೆ ತಲುಪಿ , ಜಿಲ್ಲರಗುಂಟೆಯಲ್ಲಿ ತನ್ನ ಜನಾಂಗ ದೊಂದಿಗೆ ವಾಸಮಾಡಿಕೊಂಡು ಪಶುಗಳನ್ನು ಮೇಯಿಸಿಕೊಂಡು , ವ್ಯವಸಾಯ ಮಾಡಿಕೊಂಡು ಜೀವನ ಮಾಡುವುದಕ್ಕೆ ಪೆನುಗೊಂಡೆ ರಾಯರ ಅಪ್ಪಣೆ ಪಡೆದು ಇಲ್ಲಿಯೇ ಸ್ಥಿರ ನಿವಾಸಗಳನ್ನು ಮಾಡಿಕೊಂಡು , ಬದುಕು ಜೀವನ ನಡೆಸುವುದಕ್ಕೆ ಅಪಾರವಾಗಿ ಶ್ರಮಿಸಿರುತ್ತಾರೆ . ಮಲಗೊಂಡ ಶಿಂಗ್ರಿಯವರು ಜಿಲ್ಲರಗುಂಟೆ ಮತ್ತು ಭಕ್ತರಹಳ್ಳಿಗೆ ಮಧ್ಯ ಸದಾ ಹರಿಯುವ ನದಿಯ ಪಕ್ಕದಲ್ಲಿ ಶ್ರೀ ವ್ಯಾಸರಾಯರು ಪ್ರತಿಷ್ಠಾಪನೆ ಮಾಡಿದ ದೇವಸ್ಥಾನಗಳಾದ , ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬೃಂದಾವನ ಸಮೇತ ಸಾಲಿ ಗ್ರಾಮಗಳು , ಮತ್ತು ಶ್ರೀ ಆಂಜನೇಯಸ್ವಾಮಿ ದೇವಸ್ಥಾನಗಳು , ಹುತ್ತ ಬೆಳೆದು ಗಿಡ ಮರಗಳಿಂದ ಮುಚ್ಚಿಹೋಗಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬೃಂದಾವನ ನದಿಯ ದಡದಲ್ಲಿ ಮುಳುಗಿ ಮರಳಿನಲ್ಲಿ ಮುಚ್ಚಿಕೊಂಡು ಹೋಗಿದ್ದ , ಶ್ರೀ ಆಂಜನೇಯಸ್ವಾಮಿ ದೇವರ ಕಲ್ಲು ವಿಗ್ರಹಗಳನ್ನು ದೇವರ ಪ್ರೇರಣೆಯಿಂದ ಹೊರತೆಗೆಸಿ , ಹೊಸದಾಗಿ ದೇವಸ್ಥಾನಗಳನ್ನು ಕಟ್ಟುವುದಕ್ಕೆ ಪೆನುಗೊಂಡ ಮಹಾರಾಜ ರಾಯರ ಅಪ್ಪಣೆ ಪಡೆದು ದೇವಸ್ಥಾನಗಳನ್ನು ಕಟ್ಟಿಸಿ ಜೀರ್ಣೋದ್ದಾರ ಮಾಡಿಸಿ , ಈ ದೇವಸ್ಥಾನಗಳನ್ನು ಸಮಸ್ತ ಯರಡುಕೆರೆ ಗೋತ್ರದವರಿಗೆ ಗುಡುಕಟ್ಟು ಮನೆದೇವರನ್ನಾಗಿ ಪೂಜೆ ಮಾಡಿರಿ ಎಂದು ಶಾಸನ ಹೊರಡಿಸಿದನು . ಮಹಾರಾಜ ರಾಯರ ಅಪ್ಪಣೆಯಂತೆ ಅರ್ಚಕರನ್ನು ನೇಮಿಸಿ , ಅವರಿಗೆ ರಾಯರ ಕಡೆಯಿಂದ ಜಿಲ್ಲರಗುಂಟೆ , ಭಕ್ತರಹಳ್ಳಿ , ಹರೇಸಮುದ್ರ , ಗ್ರಾಮಗಳಲ್ಲಿ ಸುಮಾರು 45 ಎಕರೆ ಮಾನ್ಯಭೂಮಿಗಳು ಏರ್ಪಾಟು ಮಾಡಿಸಿ ನಿತ್ಯ ಪೂಜೆ ನೈವೇದ್ಯಗಳನ್ನು ಮಾಡುವುದಕ್ಕೆ ಏರ್ಪಾಟು ಮಾಡಿಸಲಾಯಿತು . ಅದೆ ವಿಧವಾಗಿ ಪ್ರತಿ ಯರಡುಕೆರೆ ಗೋತ್ರದ ಅಣ್ಣ ತಮ್ಮಂದಿರುಗಳಿಂದ ದೂಪ , ದೀಪ , ನೈವೇದ್ಯಗಳಿಗೆ ಪ್ರತಿ ವರ್ಷ ಒಂದು ಸಾರಿ ಎರಡುಶೇರು ಅಕ್ಕಿ , ಬೇಳೆ , ಬೆಲ್ಲ , ಎಣ್ಣೆ , ಭೂ ವ್ಯವಸಾಯದಿಂದ ಬೆಳದ ಕಾಳು * ಕಡಿಗಳನ್ನು , ಮತ್ತು ಹಣ್ಣು , ತರಕಾರಿಗಳನ್ನು ಕೊಡಬೇಕೆಂದು ಹುಕುಂ ಹೊರಡಿಸಿದನು .

ತನ್ನ ಬೆನ್ನಿನ ಹಿಂದೆ ಬಂದ ಅಣ್ಣ ತಮ್ಮಂದಿರು ಬಂದುಬಳಗದವರನ್ನು , ನೆಂಟರನ್ನು , ಕಣ್ಣಲ್ಲಿ ಕಣ್ಣಿಟ್ಟು ಕಪಾಡಿ ಕೊಳ್ಳುವುದಕ್ಕೆ ಜಿಲ್ಲರ ಗುಂಟೆಯಲ್ಲಿ , ಛತ್ರಭೀಮನ ಕೋಟೆ ಕಟ್ಟಿ , ಬಳಗದವರಿಗೆ ಯಾವ ಕುಂದುಕೊರತೆ ಯಿಲ್ಲದೆ ಕುಂಚಿಟಿಗ ಕುಲ ಪವಿತ್ರತೆಯನ್ನು ಕಾಪಾಡಿಕೊಂಡು ಮನಶಾಂತಿಯಿಂದ ತನ್ನ ಏಳುಮಂದಿ ಅಕ್ಕ ತಂಗಿಯರ ಜೋತೆ ಜೀವನ ನಡೆಸುವ ಸಮಯದಲ್ಲಿ ತನ್ನ ದೊಡ್ಡ ತಂಗಿ ದೊಡ್ಡಹನುಮಕ್ಕನ ಜೀವನದಲ್ಲಿ ಅಚಾತುರ್ಯ ನಡೆದ ಕಾರಣದಿಂದ , ತಾನು ಜೀವಂತವಾಗಿ ಇನ್ನು ಭೂಮಿ ಮೇಲೆ ಇರಬಾರದುಯಂದು ಜಿಲ್ಲರಗುಂಟೆ ಗ್ರಾಮದಲ್ಲಿ ಜೀವಸಮಾಧಿಯಾಗಿರುತ್ತಾರೆ . ಆ ಸ್ಥಳವನ್ನು ಬಂಧು , ಬಳಗದವರು , ಅಣ್ಣ ತಮ್ಮಂದಿರು ಚಿಕ್ಕದಾಗಿ ದೇವಸ್ಥಾನವನ್ನು ನಿರ್ಮಿಸಿ ಇವರೆ ನಮ್ಮ ಕುಲದೇವರು , ದೈವಸಂಭೂತ , ಪವಾಡ ಪುರುಷನೆಂದು ಪೂಜಿಸುತ್ತಾ ಬಂದು ಕಾಲಕ್ರಮೇಣ ಎರಡುಕೆರೆ ಕುಲದಲ್ಲಿ ಒಡಕು ಹುಟ್ಟಿ ಈಗ ಬಹುಅಮಾವಾಸ್ಯ ದೇವರಗಳು , ಬಂಡಿಗಳು ಆಗಿ ಪೂಜಿಸುತ್ತಿದ್ದಾರೆ ಜಿಲ್ಲರೆಗುಂಟೆ ಅಣ್ಣತಮ್ಮಂದಿರು , ಬೆರೆಗೋತ್ರದ ಬಂದುಗಳು , ಬೇರೆಜಾತಿ , ಕುಲಸ್ಥರು ಸಹ ಪ್ರತಿ ಒಬ್ಬರು ಹಬ್ಬ ಜಾತ್ರೆ ದಿನಗಳಲ್ಲಿ ಪೂಜೆ ಸಲ್ಲಿಸುತ್ತಾ ತಮ್ಮಕೊರಿಕೆಗಳನ್ನು ಈಡೇರಿಸಿ ಕೊಳ್ಳುತ್ತಿದ್ದಾರೆ . ಈ ಸ್ಥಳ ಮಹ ಶಕ್ತಿಯುತವಾಗಿದ್ದು ಸರ್ವ ಜನರಿಗೆ ತಮ್ಮ ಕೋರಿಕೆಗಳು ಈಡೇರಿಸುತ್ತಿದ್ದು ವಿಸ್ಮಯಕಾರಿಯಾಗಿ ಪೂರ್ವ ಕಾಲದಿದಲು ನಡಿಯುತ್ತದೆ . ಕರ್ಣಾಟಕ , ತಮಿಳನಾಡು , ಆಂಧ್ರಪ್ರದೇಶಗಳಿಂದ ಈಗಲು ಎರಡು ಕೆರೆ ಅಣ್ಣ ತಮ್ಮಂದಿರು ಬಂದು ಪೂಜೆಗಳು ಮಾಡಿಕೊಂಡು ಹೋಗುತ್ತಿದ್ದಾರೆ , ಇವರೆಲ್ಲ ಪೂರ್ವದಲ್ಲಿ ಜಿಲ್ಲರಗುಂಟೆ ಯಿಂದ ಬೆರ ಬೆರೆಕಡೆ ವಲಸೆ ಹೋಗಿರುವವರೆ ಯಂದು ತಿಳಿದು ಬಂದಿದೆ , ಈಗಲು ಈ ಸ್ಥಳವನ್ನು ( ಗದ್ದುಗೆಯನ್ನು ) ತಾತನಗುಡ್ಡೆ , ಅಜ್ಜನಗುಡ್ಡೆ , ತಾತನಸಮಾದಿ , ಅಜ್ಜನಗುಡಿ ಯಂದು ಅಣ್ಣಾ ತಮ್ಮಂದಿರು ಕರಿಯುತ್ತಿದ್ದಾರೆ . ಆದ್ದರಿಂದ ಶಿಥಿಲಾವಸ್ಥೆ ಸ್ಥಿತಿಯಲ್ಲಿರುವ ಈ ಸಮಾದಿಯಗುಡಿಯನ್ನು ಜೀರ್ಣೋದ್ಧಾರ " ಪುನಃ ಪ್ರತಿಷ್ಠಾಪನೆ " ಮಾಡುವುದು , ಮುಂದಿನ ಪೀಳಿಗೆಗೆ ಇವರ ಚರಿತ್ರೆಯನ್ನು ಕೊಡುಗೆ ಕೊಡುವುದು , ನಮ್ಮ ನಿಮ್ಮೆಲ್ಲರ ಮತ್ತು 101 ಕುಲ ಭಾಂದವರ ಕರ್ತವ್ಯವಾಗಿದೆ ಆದ್ದರಿಂದ ಎರಡುಕೆರೆ ಅಣ್ಣ ತಮ್ಮಂದಿರು ಕುಂಚಿಟಿಗ ಕುಲ 48 ಗೋತ್ರದವರು ತಮ್ಮ ತಮ್ಮ ಶಕ್ತಾನು ಸಾರ ವಾಗಿ ತನು , ಮನ , ಧನ , ಕನಕ , ವಸ್ತು ರೂಪೇಣ ಆರಕ ವಾಗಿ ಸಹಾಯಮಡಿ ಸುಂದರ ವಾದ ಶ್ರೀ ಮಲಗೊಂಡ ಶಿಂಗ್ರಿ ಅವರ ಜೀವ ಸಮಾದಿ ಗದ್ದಿಗೆಯನ್ನು ದೇವಸ್ಥಾನದ ರೂಪವಾಗಿ ಸ್ಮಾರಕ ನಿರ್ಮಣ ಮಾಡುವುದಕ್ಕೆ ಎಲ್ಲರು ಕೈ ಜೋಡಿಸಬೇಕೆಂದು ಪ್ರಾರ್ಥನೆ ಯರಡುಕೆರೆ ಗೋತ್ರದ ಅಣ್ಣತಮ್ಮಂದಿರು ಶ್ರೀ ಮಲಗೊಂಡ ಶಿಂಗ್ರಿ ಅಲಯದ ಜೀರ್ಣೋದ್ದಾರ ಟ್ರಸ್ಟ್ ಮತ್ತು ಜಿಲ್ಲಡಗುಂಟೆ ಗ್ರಾಮಸ್ಥರು , ಮಡಕಶಿರ ತಾಲ್ಲೂಕು , ಅನಂತಪುರ ಜಿಲ್ಲಾ,

ವಿಳಾಸ: ಅನಂತಪುರ ಜಿಲ್ಲೆ ಮಡಚಿದ ತಾಲೂಕು ಜಿಲ್ಲಡಗುಂಟೆ

ಗೂಗಲ್ ಲೊಕೇಶನ್

https://maps.app.goo.gl/ExpHZ3DDxZm3cY718

ಸಂಪರ್ಕ: ರಾಮಚಂದ್ರಗೌಡ 81794 41608

ಪೂಜೆಯ ವಿವರ: ದೇವಾಲಯಕ್ಕೆ ವಿಶೇಷವಾಗಿ ಅರ್ಚಕರು ಎಂದು ಏನು ಇಲ್ಲ ರಾಮಚಂದ್ರಗೌಡ ಸಂಪರ್ಕಿಸಿ

ಈ ದೇವಾಲಯಕ್ಕೆ ವಿಶೇಷವಾಗಿ ಗುರುವಾರ ಮತ್ತು ಸೋಮವಾರ ಪೂಜೆ ಮಾಡುವುದು ಶ್ರೇಯಸ್ಕರ