ಶಿಕಾರಿಪುರದ ಕುಂಚಿಟಿಗರ ಓಬಿಸಿ ಬೃಹತ್ ಸಮಾವೇಶದ ಹಿಂದಿನ ರೋಚಕ ಕಥೆ.
ಶಿಕಾರಿಪುರ ಕುಂಚಿಟಿಗರ ಓಬಿಸಿ ಬೃಹತ್ ಸಮಾವೇಶ
ಶಿಕಾರಿಪುರದ ಕುಂಚಿಟಿಗರ ಸಂಘದಿಂದ ಗುಬ್ಬಿಯಲ್ಲಿ ನಡೆದ ಕುಂಚಿಟಿಗರ ಕೇಂದ್ರ ಓಬಿಸಿ ಮೀಸಲಾತಿ ಹಕ್ಕೋತ್ತಾಯ ಕಾರ್ಯಕ್ರಮ ವೀಕ್ಷಣೆಗೆ ಬಂದು ಸಮಸ್ಯೆಯನ್ನು ಅರಿತರು ಕಾರ್ಯಕ್ರಮ ದೊಡ್ಡಮಟ್ಟದಲ್ಲಿ ಮಾಡಬೇಕು ಎಂದು ಸಂಕಲ್ಪ ಅದರಂತೆ ಶಿಕಾರಿಪುರದಲ್ಲಿ ಸೆಪ್ಟೆಂಬರ್ 19 ರಂದು ಪೂರ್ವಬಾವಿ ಸಭೆ ಇಂದು ಶಿಕಾರಿಪುರದಲ್ಲಿ ನಡೆಯಿತು ಇಲ್ಲಿ ಕುಂಚಿಟಿಗರ ಬೃಹತ್ ಸಮಾವೇಶ ದಿನಾಂಕವನ್ನು 16-10-2022 ನಿಗದಿಪಡಿಸಲಾಗುತ್ತೆ. ವಿಷಯವನ್ನು ರಮೇಶ್ ಕಸವನ್ನಹಳ್ಳಿ ಅವರಿಗೆ ರವಾನಿಸಲಾಗುತ್ತೆ ಅಲ್ಲಿಂದ ಓಬಿಸಿ ತಂಡಕ್ಕೆ ವಿಶ್ವ ಕುಂಚಿಟಿಗ ಯುವಶಕ್ತಿ ರಿ. ರಾಷ್ಟ್ರೀಯ ಘಟಕ ಮತ್ತು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘ ಹಿರಿಯೂರು ಘಟಕಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಅಂತ ಅಂತವಾಗಿ ಪೂರ್ವಭಾವಿ ಸಭೆಗಳನ್ನು ನಡೆಸುತ್ತವೆ ಹಿರಿಯೂರು ತಾಲ್ಲೂಕಿನ ನಿಂದ ಕುಂಚಿಟಿಗ ಸಮಾಜವನ್ನು ಶಿಕಾರಿಪುರಕ್ಕೆ ಕರೆದೊಯ್ಯಲು ಬೇಕಾದ ಪೂರ್ವ ಸಿದ್ಧತೆಗಳನ್ನು ಬ್ಯಾಡ್ರಳ್ಳಿ ಅಶೋಕ್ ಕಾತ್ರೀಕೇನಹಳ್ಳಿ ಮಂಜು ಕುಬೇರಪ್ಪ ಮತ್ತು ಸಂಘದ ಪದಾಧಿಕಾರಿಗಳು ಹೇರುಪಟು ಮಾಡಿಕೊಳ್ಳುತ್ತಾರೆ. ವಿಶ್ವ ಕುಂಚಿಟಿಗ ಯುವ ಶಕ್ತಿ ರಿ. ರಾಷ್ಟ್ರೀಯ ಘಟಕ ಎಲ್ಲರ ಪೂರ್ವಭಾವಿ ಸಭೆಗಳಲ್ಲಿ ಭಾಗವಹಿಸಿ ಅವರ ನಿರ್ಧಾರಗಳನ್ನು ಆಲಿಸಿ ಮತ್ತು ಅಂತಿಮವಾಗಿ ಕುಂಚಿಟಿಗರ ಬಸ್ ಸಮಾವೇಶದಲ್ಲಿ ಕುಂಚಿಟಿಗ ಜನಾಂಗವನ್ನು ಯಾವ ರೀತಿ ಬರಮಾಡಿಕೊಳ್ಳಬೇಕು ಕಾರ್ಯಕ್ರಮದಲ್ಲಿ ಅಹಿಧಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಹೇಗೆ ವಹಿಸಬೇಕು ಶಿಕಾರಿಪುರದ ಸ್ಥಳೀಯ ಸಂಘದೊಂದಿಗೆ ಸಮಾವೇಶದ ಒಂದು ದಿನಕ್ಕೆ ಮುಂಚಿತವಾಗಿ ಹೋಗಿ ಸಿದ್ಧತೆ ನಡೆಸುವುದು ಕಾರ್ಯಕ್ರಮಗಳ ರೂಪರೇಷೆಗಳನ್ನು ವಿನ್ಯಾಸ ಮಾಡುವುದು ಎಂದು ತೀರ್ಮಾನಿಸಿ ಅದರಂತೆ ಹತ್ತು ತಂಡಗಳನ್ನು ರಚಿಸಿ ಒಬ್ಬೊಬ್ಬರಿಗೂ ಒಂದೊಂದು ತಂಡದ ಜವಾಬ್ದಾರಿಯನಿತ್ತು ಸಮಾವೇಶದ ಒಂದು ದಿನಕ್ಕೆ ಮೊದಲೇ ಶಿಕಾರಿಪುರವನ್ನು ತಲುಪುತ್ತದೆ ಈ ತಂಡದಲ್ಲಿ. ವಿಶ್ವ ಕುಂಚಿಟಿಗ ಯುವ ಶಕ್ತಿ ರಾಷ್ಟ್ರೀಯ ಘಟಕದ ಅಧ್ಯಕ್ಷರಾದ ಶಾಂತ್ ಗುರೂಜಿ.ಯವರು ಈ ಹಿಂದಿನಿಂದ ಕೊಂಚಿಟಿಗರ ಕೇಂದ್ರ ಓ ಬಿ ಸಿ ಹಳ್ಳಿ ಹಳ್ಳಿ ತಲುಪುತ್ತಿದ್ದಾಗ ಅದರ ಸಂಪೂರ್ಣ ಮಾಹಿತಿಗಳನ್ನು ಡಿಜಿಟಲ್ ಪ್ರಿಂಟೆಡ್ ಸೋಶಿಯಲ್ ಮಾಧ್ಯಮಗಳ ಮೂಲಕ ಪ್ರತಿ ಕುಂಚಿಟಿಗ ಕುಲ ಬಾಂಧವರಿಗೆ ತಲುಪುವಂತೆ ನೋಡಿಕೊಳ್ಳುತ್ತಿದ್ದರು ಈ ಜವಾಬ್ದಾರಿಯ ಜೊತೆಗೆ ನಿರ್ವಹಣೆ ಹೊಣೆಯನ್ನು ತೆಗೆದುಕೊಂಡು, ಸುಬ್ರಮಣಿ ಎನ್ ಕುಂಚವಂಶಿ, ಭೂತರಾಜ್, ಕರಿಯಣ್ಣ ಸಿ, ಡಿ ಕೆ ಗೌಡ, ರಾಜಣ್ಣ ಜ್ಞಾನೋದಯ, ಆಡಿಟರ್ ಹರೀಶ್ ಮೋಹನ್ ಕುಮಾರ್ ಎಸ್, ನವೀನ್ ಕುಮಾರ್, ಹುಲಿಯಪ್ಪ ಪಾವಗಡ, ರಂಗನಾಥ್ ಆರ್ ಕುಂಚಿಟಿಗ, ಮತ್ತು ಇವರಿಗೆ ಪೂರಕವಾಗಿ ತಲ ಒಬ್ಬೊಬ್ಬರಿಗೆ ಸಹಾಯಕರನ್ನು ನಿಗದಿಪಡಿಸಿಕೊಂಡು, ಬೃಹತ್ ಜಾತ ನಿರ್ವಹಣೆ, ಮಾಧ್ಯಮ, ಸುರಕ್ಷತೆ, ಸಾರಿಗೆ ಸಂಪರ್ಕ, ಪಾರ್ಕಿಂಗ್ ಲಾಟ್, ಹೀಗೆ ಹತ್ತು ಹಲವಾರು ವಿಷಯಗಳನ್ನು ಹಂಚಿಕೊಂಡು ಕಾರ್ಯ ನಿರ್ವಹಿಸಿದೆವು, ನಮ್ಮಗಳ ಕಾರ್ಯ ಬಂದ ಜನಸಂಖ್ಯೆಯನ್ನು ಸ್ನೇಹ ಬದ್ಧತೆಯಿಂದ ಮೆರವಣಿಗೆ ಮುಖಾಂತರ ಸಾಂಸ್ಕೃತಿಕ ಭವನದ ಬಾಗಿಲವರೆಗೂ ಕುಲಬಾಂಧವರನ್ನು ತಂದುಬಿಡುವ ಜವಾಬ್ದಾರಿ ನಮ್ಮದಾಗಿತ್ತು ನಮ್ಮ ಜೊತೆಗೆ ಅತ್ಯಂತ ಸ್ನೇಹ ಮಯವಾಗಿ ಸೌಹಾರ್ದ ಹಿತವಾಗಿ ಸ್ಥಳೀಯ ಕುಂಚಿಟಿಗ ಕುಲಬಾಂಧವರು ಶಕ್ತಿ ಮೀರಿ ನಮಗಿಂತ ಉನ್ನತವಾಗಿ ಶ್ರಮಿಸಿರುತ್ತಾರೆ ಎಂಬ ಮಾತನ್ನು ಇಲ್ಲಿ ಮರೆಯುವುದಿಲ್ಲ. ಈ ಎಲ್ಲಾ ತಂಡದ ಮುಖಂಡತ್ವ ವಹಿಸಿದ್ದ ರಮೇಶ್ ಕಸವನಹಳ್ಳಿ ಸ್‌ವಿ ರಂಗನಾಥ್, ಸಮುದಾಯದ ಪ್ರತಿಯೊಬ್ಬರ ಜೊತೆ ಸಂವಹಣೆ, ವೇದಿಕೆ ಮೇಲೆ ಪ್ರಸ್ತಾವನೆ ಕುಂಚಿಟಿಗರ ಕೊಲಶಾಸ್ತ್ರಜ್ಞರ ಪ್ರತಿ ಮತ್ತು ಮನವಿ ಪತ್ರವನ್ನು ಸಿದ್ಧಪಡಿಸಿ ವೇದಿಕೆ ಮೇಲಿನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅವರ ಜವಾಬ್ದಾರಿಗೆ ಜವಾಬ್ದಾರಿಯಾಗಿತ್ತು. ಇನ್ನು ಶಿಕಾರಿಪುರದ ಸ್ಥಳೀಯ ಸಂಘ, ಬಂದಂತಹ ಕುಲಬಾಂಧವರಿಗೆ ರೂಮುಗಳ ವ್ಯವಸ್ಥೆ, ಊಟ ಉಪಚಾರಗಳು ಹಾಗೂ ಶಿಕಾರಿಪುರದ ಕುಂಚಿಟಿಗರ ಬೃಹತ್ ಓಬಿಸಿ ಸಮಾವೇಶದ ಖರ್ಚು ವೆಚ್ಚಗಳನ್ನು ಸ್ಥಳೀಯ ಹೋಗಿ ಮಾಡಬೇಕಾದಂತ ಎಲ್ಲಾ ಕೆಲಸಕಾರ್ಯಗಳನ್ನು ಅಚ್ಚಿಕಟ್ಟಾಗಿ ನಡೆಸಿಕೊಳ್ಳಲು ಅಪಾರ ಪರಿಶ್ರಮವನ್ನು ವಹಿಸಿತು, ಇದರ ಮಧ್ಯೆ ಹಲವಾರು ಸಂಘಟನೆಗಳು ತಮ್ಮ ತಮ್ಮ ಶತ ಅನುಸಾರ ಸ್ಥಳೀಯವಾಗಿ ಸಭೆ ಕಲಿತು ಕುಂಚಿಟಿಗ ಕುಲಬಾಂಧವರನ್ನು ಸಭೆಗೆ ಕರೆ ತರಲು ನಾನಾ ರೀತಿಯ ಶ್ರಮಗಳನ್ನು ವಹಿಸಿರುತ್ತಾರೆ, ಒಟ್ಟಾರೆಯಾಗಿ ಒಂದು ಕಾರ್ಯಕ್ರಮದ ಯಶಸ್ವಿಗೆ ಸಮಸ್ತ ಕುಂಚಟಿಗ ಕುಲಬಾಂಧವರು ನಾನಾ ರೀತಿಯಲ್ಲಿ ಶ್ರಮಿಸಿ ಕುಂಚಿಟಿಗರ ಒಗ್ಗಟ್ಟಿನ ಬಲಪ್ರದರ್ಶನ ಸಮಾಜಕ್ಕೆ ತೋರಿಸು ವಲ್ಲಿ ಒಂದು ಯಶಸ್ವಿ ಹೆಜ್ಜೆಯನ್ನು ಮುನ್ನಡಿ ಬರೆಯಿತು. ಶಿಕಾರಿಪುರದ ಸ್ಥಳೀಯ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ತಮ್ಮ ಟ್ರ್ಯಾಕ್ಟರ್ ಗಳನ್ನು ತೆಗೆದುಕೊಂಡು ಬಾಳೆದಿಂಡುಗಳ ಲೋಡ್ ತಳಿದು ತೋರಣಗಳ ಲೋಡ್ ಗಳನ್ನು ತೆಗೆದುಕೊಂಡು ಬಂದು ಸ್ವಯಂ ಪ್ರೇರಿತವಾಗಿ ಎಲ್ಲವನ್ನು ಸಿಂಗರಿಸಿ ಯಾರಿಂದಲೂ ಯಾವುದೇ ರೀತಿಯಿಂದ, ಹೇಳಿಸಿಕೊಳ್ಳದೆ ಮಾಡಿದ ಕೆಲಸಗಳನ್ನು ನೋಡಿ ನಾವು ಕೂಡ ಮೂಕವಿಸ್ಮಿತರಾದೆವು, ಇಂತಹ ಸನ್ನಿವೇಶವನ್ನು ಒದಗಿಸಿಕೊಟ್ಟ ಎಲ್ಲಾ ಕುಲದ ದೇವತೆಗಳಿಗೆ ವಂದಿಸುತ್ತಾ ಶಿಕಾರಿಪುರದ ಕಾರ್ಯಕ್ರಮದ ಚಾಲನೆಗೆ ಮುನ್ನುಡಿ ಹಾಡಿದ ಉಚ್ಚರಾಯಸ್ವಾಮಿ ಆಂಜನೇಯನಿಗೆ ಈ ಯಶಸ್ವಿಯನ್ನು ಅರ್ಪಿಸುತ್ತೇವೆ (ಹಾಗೂ ಪರೋಕ್ಷವಾಗಿ ಕಣ್ಣಿಗೆ ಕಾಣದೆ ಶ್ರಮಿಸಿದ ಎಲ್ಲಾ ನನ್ನ ಕುಲಬಾಂಧವರಿಗೆ ಈ ಯಶಸ್ವಿ ಸಲ್ಲುತ್ತದೆ)
✍️ ಶಾಂತ್ ಗುರೂಜಿ