ಕುಂಚಿಟಿಗರ ಕೆಂದ್ರ ಓ ಬಿ ಸಿ ಮೀಸಲಾತಿ ಜನ ಜಾಗೃತಿ ಜಾಥಾ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು

ಕುಂಚಿಟಿಗರ ಕೆಂದ್ರ ಓ ಬಿ ಸಿ ಮೀಸಲಾತಿ ಜನ ಜಾಗೃತಿ ಜಾಥಾ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು

"ಕುಂಚಿಟಿಗರ ಕೆಂದ್ರ ಓ ಬಿ ಸಿ ಮೀಸಲಾತಿ ಜನ ಜಾಗೃತಿ ಜಾಥಾ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು : ಸೆಪ್ಟಂಬರ್ 11ನೇ ತಾರೀಕು ಭಾನುವಾರ , ಅರಕಲಗೂಡು ತಾಲ್ಲೋಕಿನ ಕುಂಚಿಟಿಗರ ಸಂಘ,ಕರ್ನಾಟಕ ರಾಜ್ಯ ಕುಂಚಿಟಿಗರ ಕೇಂದ್ರ OBC ಮೀಸಲಾತಿ ಹೋರಾಟ ಸಮಿತಿ,ಮತ್ತು ವಿಶ್ವಕುಂಚಿಟಿಗ ಯುವಶಕ್ತಿ( ರಿ )ಬೆಂಗಳೂರು ಇವರ ಸಹಯೋಗದಲ್ಲಿ,ಹಿರಿಯೂರಿನ ಗಾಂಧೀವಾದಿ ನೀರಾವರಿ ಹೋರಾಟಗಾರ ಕಸವನಹಳ್ಳಿ ರಮೇಶ್ ಸಾರಥ್ಯದಲ್ಲಿ ಕುಂಚಿಟಿಗರ ಕೇಂದ್ರ ಓ ಬಿ ಸಿ ಮೀಸಲಾತಿ ಜನ ಜಾಗೃತಿ ಜಾಥಾ ಅರಕಲಗೂಡು ತಾಲ್ಲೂಕಿನ ಕುಂಚಿಟಿಗರು ವಾಸಿಸುವ ಗ್ರಾಮದಲ್ಲಿ ಜಾಥಾಕ್ಕೆ ಚಾಲನೆ ನೀಡಿ ಮಾತಾನಾಡಿದ ಓಬಿಸಿ ಹೊರಟ ಸಮಿತಿಯ ಶಾಂತ್ ( ಕಸವನಹಳ್ಳಿ ರಮೇಶ್, ತುರ್ತು ಕಾರ್ಯನಿಮಿತ್ತ ಬರಲಾಗಿಲ್ಲ ) ಕುಂಚಿಟಿಗರಿಗೆ ಕಳೆದ 28 ವರ್ಷಗಳಿಂದ ಕೇಂದ್ರ ಸರ್ಕಾರದ ಓ ಬಿ ಸಿ ಮೀಸಲಾತಿ ಕೈ ತಪ್ಪಿ ಹೋಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ತುಂಬಲಾರದ ನಷ್ಟ ಉಂಟಾಗಿದೆ. ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಪ್ರವರ್ಗ 3ಎ ನಲ್ಲಿ ಬರುವ ಇತರೆ ಎಲ್ಲಾ ಜಾತಿಗಳಿಗೆ ಕೇಂದ್ರ ಓ ಬಿ ಸಿ ಮೀಸಲಾತಿ ಕೊಟ್ಟು ಕುಂಚಿಟಿಗರನ್ನು ಮಾತ್ರ ಕೈ ಬಿಡುವ ಮೂಲಕ ಕಳೆದ ಮೂರು ದಶಕಗಳ ಕಾಲ ಕುಂಚಿಟಿಗರಿಗೆ ಮೀಸಲಾತಿ ವಂಚನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ವಿಶ್ವವಿದ್ಯಾಲಯ ಸಿದ್ದಪಡಿಸಿರುವ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವ ಮೂಲಕ ಕುಂಚಿಟಿಗರಿಗೆ ರಾಜ್ಯ ಸರ್ಕಾರದ ಪ್ರವರ್ಗ 1 ಮತ್ತು ಕೇಂದ್ರ ಸರ್ಕಾರದ ಓ ಬಿ ಸಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹ ಪೂರ್ವಕ ಒತ್ತಾಯ ಮಾಡಿದರು. ಕುಂಚಿಟಿಗ ಮತದಾರರು ಕೂಡ ಜಾಗೃತರಾಗಿ ಪಕ್ಷಬೇಧ ಮರೆತು ಓ ಬಿ ಸಿ ಮೀಸಲಾತಿ ಕೊಟ್ಟವರಿಗೆ ನಮ್ಮ ಮತ ಎಂದು ಕುಂಚಿಟಿಗರ ಮೀಸಲಾತಿ ಹಕ್ಕೋತ್ತಾಯ ಮಾಡೋಣ ಎಂದು ಕರೆ ಕೊಟ್ಟರು. ಸ್ಥಳೀಯ ಕುಂಚಿಟಿಗ ಸಮಾಜದ ಮುಖಂಡ ತಿಮ್ಮೇಗೌಡರು ಗೌರವ ಅಧ್ಯಕ್ಷರು ಕುಂಚಿಟಿಗರ ಸಂಘ ಅರಕಲಗೂಡು. ಮಾತನಾಡಿ ಕುಂಚಿಟಿಗರಿಗೆ ಓ ಬಿ ಸಿ ಮೀಸಲಾತಿ ಇಲ್ಲದೆ ನವೋದಯ ಶಾಲೆಯಲ್ಲಿ ಸಿಗುವ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ,ಜೆ ಇ ಇ,ನೀಟ್ ಮೂಲಕ ಹೊರರಾಜ್ಯದ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣ ಪಡೆಯಲು ಆಗುತ್ತಿಲ್ಲ,ಅತಿ ಹೆಚ್ಚು ಸರ್ಕಾರಿ ನೌಕರಿ ಇರುವ ರೈಲ್ವೆ ಅಂಚೆ ಬ್ಯಾಂಕಿಂಗ್ ಮಿಲಿಟರಿ ಸ್ಟಾಫ್ ಸೆಲೆಕ್ಷನ್ ಕಮಿಷನ್ ಭರ್ತಿ ಮಾಡುವ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗಿಲ್ಲ,ಯುಪಿಎಸ್ಸಿ ಮೂಲಕ IAS,IPS,IFS,IRS,ನಂತಹ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿಲ್ಲ,ಕೇಂದ್ರ ಸರ್ಕಾರಿ ಸ್ವಾಮ್ಯದ BEL,BHEL,BSNL, BML,HAL,HPCL BPCL,IOCL,DRDO,NMDC ಮುಂತಾದ ಸಂಸ್ಥೆಗಳಲ್ಲಿ ಉದ್ಯೋಗವಂಚಿತರಾಗದ್ಧೇವೆ. ಕುಂಚಿಟಿಗರಿಗೆ ಒಕ್ಕಲಿಗರ ಜೊತೆಗೆ ಮಾಡಿಕೊಂಡ ರಾಜಕೀಯ ಮೈತ್ರಿಯಲ್ಲಿ ನಂಬಿಕೆದ್ರೋಹ ಉಂಟಾಗಿದೆ. ಇನ್ನು ಒಕ್ಕಲಿಗ ಬೇರೆ,ಕುಂಚಿಟಿಗ ಬೇರೆ ಎಂದು ಗಂಭೀರವಾಗಿ ಆರೋಪಿಸಿದರು. ಅಶೋಕ್ ಕಾರ್ಯದರ್ಶಿ ಅರಕಲಗೂಡು ಕುಂಚಿಟಿಗ ಸಂಘ. ಕುಂಚಿಟಿಗರಿಗೆ ಇಲ್ಲಿಯತನಕ ಆಡಳಿತ ಮಾಡಿದ ಎಲ್ಲಾ ರಾಜಕೀಯ ಪಕ್ಷಗಳು ನ್ಯಾಯ ಕೊಟ್ಟಿಲ್ಲ,ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಓ ಬಿ ಸಿ ಮೀಸಲಾತಿ ಕಗ್ಗಂಟಾಗಿ ಉಳಿದಿದೆ,ಗುರಿ ತೋರುವ ಗುರುಗಳಲ್ಲೇ ಬಿನ್ನಾಭಿಪ್ರಾಯ ಇರುವುದರಿಂದ ಕುಂಚಿಟಿಗ ಸಮಾಜಕ್ಕೆ ಶೈಕ್ಷಣಿಕ,ಔದ್ಯೋಗಿಕ ಸಾಮಾಜಿಕ ರಾಜಕೀಯ,ಆರ್ಥಿಕ ಹಿನ್ನಡೆಯಾಗಿದೆ,ಕುಂಚಿಟಿಗರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ತಿಳಿಸಿದರು. ವಿಶ್ವ ಕುಂಚಿಟಿಗ ಯುವ ಶಕ್ತಿ ಸಂಘದ ಖಜಾಂಚಿ ಮೋಹನ್ ಕುಮಾರ್ ಎಸ್. ಮಾತನಾಡಿ ಕುಂಚಿಟಿಗರು ಕರ್ನಾಟಕ ರಾಜ್ಯದ 17 ಜಿಲ್ಲೆಗಳಲ್ಲಿ 40 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದೇವೆ,ಕುಂಚಿಟಿಗರಿಗೆ ಐತಿಹಾಸಿಕ ಹಿನ್ನೆಲೆಯ ಶಿಲಾ ಶಾಸನಗಳ ಪ್ರಕಾರ ಎರಡುಸಾವಿರ ವರ್ಷಗಳ ಇತಿಹಾಸ ಇದೆ,ಕುಂಚಿಟಿಗ ಒಂದು ಸ್ವತಂತ್ರ ಜಾತಿ. ಓ ಬಿ ಸಿ ಮೀಸಲಾತಿ ನಮ್ಮ ಆಜನ್ಮಸಿದ್ಧ ಹಕ್ಕು ಎಂದು ತಿಳಿಸಿದರು."ಕುಂಚಿಟಿಗರ ನಡೆ ಕೇಂದ್ರ OBC ಮೀಸಲಾತಿ ಕಡೆ "ಘೋಷವಾಕ್ಯದೊಂದಿಗೆ "ಸಮುದಾಯಕ್ಕಾಗಿ ಒಂದು ಭಾನುವಾರ "ಮನೆಗೊಬ್ಬ ಸದಸ್ಯರು ಜಾಥಾದಲ್ಲಿ ಹೆಜ್ಜೆ ಹಾಕಿ ಹೋರಾಟಕ್ಕೆ ಬೆಂಬಲ ಕೊಡಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಅರಕಲಗೂಡು ತಾಲೂಕು ಕುಂತಿಟಿಗರ ಸಂಘದ ನಿರ್ದೇಶಕರುಗಳು ಪದಾಧಿಕಾರಿಗಳು ಹಾಗೂ ಕುಂಚಿಟಿಗ ಮುಖಂಡರುಗಳು ಭಾಗವಹಿಸಿ ಸಮುದಾಯಕ್ಕೆ ಸ್ಪೂರ್ತಿ ತುಂಬುವ ಮಾತುಗಳನ್ನಾಡಿ ಶಕ್ತಿ ತುಂಬಿದರು ಈ ಸಂದರ್ಭದಲ್ಲಿ ವಿಶ್ವ ಕುಂಚಿಟಿಗ ಯುವಶಕ್ತಿಯ ಎಲ್ಲ ಪದಾಧಿಕಾರಿಗಳು ಕೂಡ ಹಾಜರಿದ್ದರು