ಶಿಕಾರಿಪುರ ಕುಂಚಿಟಿಗರ ಐತಿಹಾಸಿಕ ಬೃಹತ್ ಸಮಾವೇಶಕ್ಕೆ ಪೂರ್ವಭಾವಿ ಸಭೆ

ಹಿರಿಯೂರು :ಸೆ 25,ಹಿರಿಯೂರು ತಾಲ್ಲೋಕಿನ ಬ್ಯಾಡರಹಳ್ಳಿ ಗ್ರಾಮದ ಲಕ್ಕಮ್ಮ ದೇವಸ್ಥಾನದ ಆವರಣದಲ್ಲಿ ಹಿರಿಯೂರು ತಾಲ್ಲೋಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ ಅಶೋಕ್ ರವರ ಅಧ್ಯಕ್ಷತೆಯಲ್ಲಿ ಶಿಕಾರಿಪುರ ಕುಂಚಿಟಿಗರ ಐತಿಹಾಸಿಕ ಬೃಹತ್ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲು ಪೂರ್ವಬಾವಿ ಸಭೆ ನಡೆಸಲಾಯಿತು. ಕುಂಚಿಟಿಗರ ಕೇಂದ್ರ OBC ಮೀಸಲಾತಿ ಜನ ಜಾಗೃತಿ ಜಾಥಾ ತಂಡದ ಮುಖಂಡರಾದ ಕಸವನಹಳ್ಳಿರಮೇಶ್ ಮಾತನಾಡಿ,ಶಿಕಾರಿಪುರದಲ್ಲಿ ಅಕ್ಟೋಬರ್ 16 ರಂದು ನಡೆಯುವ ಕುಂಚಿಟಿಗರ ಏಕೀಕರಣ ಮತ್ತು ಧೃವೀಕರಣ ಮಾಡುವ ಐತಿಹಾಸಿಕ ಬೃಹತ್ ಸಮಾವೇಶಕ್ಕೆ ಕರ್ನಾಟಕ ರಾಜ್ಯದ 17 ಜಿಲ್ಲೆಗಳಲ್ಲಿ ನೆಲೆಸಿರುವ ಕುಂಚಿಟಿಗರು ವಾಸಿಸುವ ಪ್ರತಿ ಹಳ್ಳಿಯಿಂದ ಒಂದು ವಾಹನ ಮಾಡಿಕೊಂಡು ಸಮಾವೇಶಕ್ಕೆ ಬರುವ ಮೂಲಕ ಕುಂಚಿಟಿಗರ ಒಗ್ಗಟ್ಟು ಮತ್ತು ಶಕ್ತಿ ಪ್ರದರ್ಶನ ಮಾಡಬೇಕು ಎಂದು ಕರೆ ಕೊಟ್ಟರು. ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನಕಾರ ಎಸ್ ವಿ ರಂಗನಾಥ್ ಮಾತನಾಡಿ ಶಿಕಾರಿಪುರ ಸಮಾವೇಶದಲ್ಲಿ ಸ್ವಾಭಿಮಾನಿ ಕುಂಚಿಟಿಗರು ಬೃಹತ್ ಸಂಖ್ಯೆಯಲ್ಲಿ ಸೇರಿ ಕುಂಚಿಟಿಗರಿಗೆ ಕುಲಶಾಸ್ತ್ರ ಅಧ್ಯಯನ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವ ಮೂಲಕ ಕೇಂದ್ರ ಸರ್ಕಾರದ OBC ಮೀಸಲಾತಿ ಮತ್ತು ರಾಜ್ಯ ಸರ್ಕಾರದ ಪ್ರವರ್ಗ -1 ರಲ್ಲಿ ಮೀಸಲಾತಿಗೆ ಹಕ್ಕೋತ್ತಾಯ ಮಾಡಬೇಕು,ಕುಂಚಿಟಿಗರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುವ ಸಮಾವೇಶಕ್ಕೆ ಮನೆಗೊಬ್ಬ ಸದಸ್ಯರು ತಪ್ಪದೇ ಬರಬೇಕೆಂದು ತಿಳಿಸಿದರು. ವಿಶ್ವ ಕುಂಚಿಟಿಗ ಯುವಶಕ್ತಿ ಸಂಘದ ಶಾಂತಗುರೂಜೀ ಮಾತಾನಾಡಿ ರಾಜ್ಯದ 17 ಜಿಲ್ಲೆಗಳಲ್ಲಿರುವ ಕುಂಚಿಟಿಗರು ಹೋಬಳಿ ಮಟ್ಟದಲ್ಲಿ ಈಗಿನಿಂದಲೇ ತಂಡಗಳನ್ನು ಮಾಡಿ ಪ್ರತಿ ಗ್ರಾಮಪಂಚಾಯತಿಯಿಂದ ಒಂದು ಬಸ್ಸು ಮಾಡಿಕೊಂಡು ಸಮಾವೇಶಕ್ಕೆ ಬರುವ ಮೂಲಕ ಕುಂಚಿಟಿಗರ ಕೂಗು ಕೇಂದ್ರ ಸರ್ಕಾರಕ್ಕೆ ಮುಟ್ಟಿಸಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬ್ಯಾಡರಹಳ್ಳಿ ಸಿ ಅಶೋಕ್,ಪ್ರಧಾನ ಕಾರ್ಯದರ್ಶಿ ವಿ ಕುಭೇರಪ್ಪ,ಕಾರ್ಯದರ್ಶಿ ಕಾತ್ರೀಕೆನಹಳ್ಳಿ ಮಂಜುನಾಥ್,ಪಾವಗಡ ಹುಲಿಯಪ್ಪ,ಮಲ್ಲಪ್ಪನಹಳ್ಳಿ ಜೋಗೇಶ್,ಮಾಸ್ತಿಕಟ್ಟೆ ಚಂದ್ರಶೇಖರ್,ಓಬಳಾಪುರ ಸಿದ್ದೇಗೌಡ,ದಿಂಡಾವರ ಚಂದ್ರಗಿರಿ,ಚಿಲ್ಲಹಳ್ಳಿ ನಿಜಲಿಂಗಪ್ಪ,ಬೀರೇನಹಳ್ಳಿ ಪುಟ್ಟಸ್ವಾಮಿ,ರಂಗ ನಾಥಪುರ ಮೋಹನ್ ಗೌಡ,ಶಿರಾ ಕುಂಚಿಟಿಗರ ಸಂಘದ ಪುಟ್ಟಕಾಮಣ್ಣ,ಹುಲುಗಲಕುಂಟೆ ರಂಗನಾಥ್,ಶಶಿಕಲಾ, ಬ್ರಹ್ಮಾನಂದ ಕೊಟ್ಟಿಗೆ ಏಣಿ ಸತೀಶ್ ಗೌಡ,ಈಶ್ವರ್ ದಗ್ಗೆ,ಕೆ ಕೆ ಹಟ್ಟಿ ಜಯಪ್ರಕಾಶ್, ಪೆಪ್ಸಿ ಹನುಮಂತರಾಯ,ಆಡಿಟರ್ ಹರೀಶ್ ಮುಂತಾದವರು ಉಪಸ್ಥಿತರಿದ್ಧರು